ಮಂಗಳೂರು, ನ.೨೬: ಬಕ್ರೀದ್ ಹಬ್ಬದ ವೇಳೆ ಮತೀಯ ಶಕ್ತಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಸಲುವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯ ಸಶಸ್ತ್ರ ಮೀಸಲು ಪಡೆಯ ೭ ತುಕಡಿ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಬಳಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಾದ ಮಂಗಳೂರು, ಪುತ್ತೂರು, ಸುರತ್ಕಲ್,ಉಳ್ಳಾಲ, ಬಂಟ್ವಾಳ ವಾಮಂಜೂರು, ಬಂದರ್, ಕುದ್ರೋಳಿ ಮತ್ತಿತರ ಕಡೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.